Sunday, September 4, 2011


ಚೌಕಾಸಿ...     

ಎಲ್ಲಿಲ್ಲ ಈ "ಬಿಸಿ"
ಎಲ್ಲೆಡೆ ಬರೀಚೌಕಾಸಿ
ಮನೆ ಹುಡುಕುವ ದಳ್ಳಾಳಿ
ಬಟ್ಟೆ ಹೊಲಿಯುವ ದರ್ಜಿ;
ಹಬ್ಬ ಬಂತೆಂದರೆ...??
ಎಲ್ಲಾ ಅವರವರ ಮರ್ಜಿ!

ಹೂವು - ಹಣ್ಣು...ತರಕಾರಿ
ಬಾಳೆಕಂಬ, ಮಾವಿನ ಸೊಪ್ಪು,
ಅಷ್ಟೇ ಏಕೆ...?
ಹುಬ್ಬೇರಿಸದಿರಿ,
ದೇವರನ್ನೂ ಕೂಡ, ಸ್ವಾಮಿ!
ಚೌಕಾಸಿ...

ಮೊನ್ನೆ...ಮೊನ್ನೆ ಆಯ್ತು -
ವಿನಾಯಕ ಚತುರ್ಥಿ,
ನೋಡಬೇಕಿತ್ತು ನೀವ್ ಕಣ್ರಿ -
ಈ ನಮ್ ಜನ್ರ ಸ್ಥಿತಿ,
ವ್ಯಾಪಾರಸ್ಥರ ಹಾವಳಿಗೆ ಸಿಕ್ಕಿ -
ಆಗಿತ್ತು ಅದೋ ಗತಿ...!

ವಿನಾಯಕನ ವಿಗ್ರಹಕ್ಕೆ, ನಾನಾ ವಿಧಗಳಿಗೆ
ಗಗನಕ್ಕೇರಿದ ಬೆಲೆ -
ಬಿಡುವರೇ ನಮ್ ಜನ...?
ಹಬ್ಬ ಮುಗಿಸುದ್ರು...
ಭಾರೀ ಕಾಸ್ನಲ್ಲಿ,
ಎಲ್ಲಾ ಬರೀ ಚೌಕಾಸೀಲಿ...!!

ಹಪಮ

Saturday, August 20, 2011

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಎಡೆ... ೩೦/೯/೨೦೦೦

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಎಡೆ... ೩೦/೯/೨೦೦೦: ಯಂಡ್ರು ಮಕ್ಳು ಸಂಸಾರಿಲ್ದೆ ಬದ್ಕೊಕ್ಕಾಗ್ದೆ ಜನ್ರು...? ಮನೆ - ಮಠ, ಸಾಮ್ರಾಜ್ಯ ಅಂತ ಹೊಡ್ದಾಡ್ತಾರ್ಯಾಕೆ ಈ ಹುಚ್ರು...? ಮೇಲವೆಲ್ಲಾ "ನಶ್ವರ - ನಶ್ವರ" ಎಂದು ಕೂಗಾ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಕಾಲಚಕ್ರ... ೪/೨/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಕಾಲಚಕ್ರ... ೪/೨/೨೦೧೧: ತಿಂಗಳುರುಳಿದೆ , ತಿಂಗಳಾ ಬೆಳಕಡಿ ; ತಿಂಗಳರಳಿ - ತಿಂಗಳುರುಳುವಾ ನಡುವೆ , ತಿಂಗಳಿಗೆ ತಿಂಗಳಾ ಸೇರ್ಪಡೆ ... ಋತು ತೋರಿದೆ , ಮುಂದಿನಾ ಋತುಗೆಡೆ ... ತಿಂಗಳರಳಿ ತ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಗಗನ ೧೩/೫/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಗಗನ ೧೩/೫/೨೦೧೧: ಗಗನದಾ ಬನ ಏರಿದೋರ್ ಎಷ್ಟು ಜನ , ಸ್ಪರ್ಶಿಸಲೆಂದಲವರ ಮನ , ಸಿಗುವುದಾರಿಗಾ ಚುಂಬನ ...? ಏನಿದೀ ತವಕ , ನಮ್ಮೀ ಜೀವಕ , ಹಾರಲಾ ಆಕಾಶಕ ...? ಮನ ಕುಣಿದಿದೆ ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ನಮ್ ಬಾಸೆ.... ೨೫/೬/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ನಮ್ ಬಾಸೆ.... ೨೫/೬/೨೦೧೧: ಮಾತಾಡಕ್ ನಮ್ ಬಾಸೆ ಯಾರ್‌ಗಿಲ್ಲ ಆಸೆ? ಬುಡ್ವಲ್ದು ಹುಚ್‍ನನ್ ಮಗುನ್ - ಪರದೇಸಿ ಪರ‍್ಸೆ....! ಅವ್ವ-ಅಪ್ಪ ಆದ್ರು ಮಮ್ಮ-ಪಪ್ಪ; ಅರ್ಥವಾಗ್ದು ನಮ್ ಬಾಸೆ, ತಿ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಬಸ್ ಸ್ಟಾಪಿನಲ್ಲಿ ಕಂಡ ಮುಖ.....(ಇಂಟ್ರೊ ೧೯೯೯ರಲ್ಲಿ ೨ನೇ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....:
ಬಸ್ ಸ್ಟಾಪಿನಲ್ಲಿ ಕಂಡ ಮುಖ.....(ಇಂಟ್ರೊ ೧೯೯೯ರಲ್ಲಿ ೨ನೇ...
: ಬಸ್ ಸ್ಟಾಪಿನಲ್ಲಿ ಕಂಡ ಮುಖ..... ( ಇಂಟ್ರೊ ೧೯೯೯ರಲ್ಲಿ ೨ನೇ ಬಹುಮಾನ ತಂದುಕೊಟ್ಟ ಕವನ , ರಾಮಯ್ಯ ಮೆಡಿಕಲ್ ಕಾಲೇಜ್ ) ಬಸ್ ಸ್ಟಾಪು ಎಂದೊಡನೆ ಬರುವುದು ಜ್ಞಾಪಕಕೆ ಅನೇ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಒಂದು ಮೌನ ವ್ಯಥೆ...    ೧೮/೮/೨೦೧೧ ನಾ ಮನೆಮಾಡಿದ್ದೆ ನ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....:
ಒಂದು ಮೌನ ವ್ಯಥೆ... ೧೮/೮/೨೦೧೧


ನಾ ಮನೆಮಾಡಿದ್ದೆ
ನ...
: ಒಂದು ಮೌನ ವ್ಯಥೆ... ೧೮/೮/೨೦೧೧ ನಾ ಮನೆಮಾಡಿದ್ದೆ ನಿನ್ನಲಿ ಅಂದು, ಬೆಳೆಯ ತೊಡಗಿದ್ದೆ - ನಿನ್ನಾಹಾರವ ತಿಂದು...! ವಿಷಯ ತಿಳಿದೊಡನೆ, ಎಲ್ಲರಲಿ ಮೂಡಿತ...

Thursday, August 18, 2011


ಒಂದು ಮೌನ ವ್ಯಥೆ...    ೧೮/೮/೨೦೧೧


ನಾ ಮನೆಮಾಡಿದ್ದೆ
ನಿನ್ನಲಿ ಅಂದು,
ಬೆಳೆಯ ತೊಡಗಿದ್ದೆ -
ನಿನ್ನಾಹಾರವ ತಿಂದು...!


ವಿಷಯ ತಿಳಿದೊಡನೆ,
ಎಲ್ಲರಲಿ ಮೂಡಿತಾ ಪರ್ವ;
ಅದರಿಂದಾನೆ -
ನಿನಗೆ ಮಹಾ ಗರ್ವ...!


ವೈದ್ಯರ ಬಳಿ ಕರೆದೊಯ್ದರು ನಿನ್ನ,
ತಿಳಿದರು ನನ್ನ ಲಿಂಗವನ್ನ...
ಎಲ್ಲರಲಿ ಮಾತಾಯಿತು -
"ಗಂಡಾಗಿದ್ದರೆ ಎಷ್ಟು ಚೆನ್ನ....!"


ಎಂತಹದಾ ಸಂದರ್ಭ,
ಮನೆಮಂದಿಗೆಲ್ಲಾ -
ಬೇಡ,
ಆ ಗರ್ಭ...!!!


ವೈದ್ಯರ ಸಲಹೆ -
ಎಲ್ಲರೂ ಸೇರಿ
ಸದ್ದಿಲ್ಲದೆ ಚಿವುಟಿದರು,
ಮೊಗ್ಗು ಅರಳದಿಹೆ...!


ಆಚರಿಸುತ ಭ್ರೂಣ ಹತ್ಯೆ,
ಹೇಳಿದರು ನಿನಗೆ -
"ಪುನಃ ಪ್ರಯತ್ನಿಸು,
ಸುಮ್ನ್ಯಾಕ್ ಅತ್ತೀಯೆ....!!!"


ಹಪಮ

Tuesday, August 9, 2011


ಬಸ್ ಸ್ಟಾಪಿನಲ್ಲಿ ಕಂಡ ಮುಖ.....
(ಇಂಟ್ರೊ ೧೯೯೯ರಲ್ಲಿ ೨ನೇ ಬಹುಮಾನ ತಂದುಕೊಟ್ಟ ಕವನ, ರಾಮಯ್ಯ ಮೆಡಿಕಲ್ ಕಾಲೇಜ್)

ಬಸ್ ಸ್ಟಾಪು ಎಂದೊಡನೆ ಬರುವುದು
ಜ್ಞಾಪಕಕೆ ಅನೇಕ ವಿಷಯ -
ಮುಖ್ಯವಾದವು ಬರೀ ಮುಖಗಳು; ಅದೂ,
ಬರೀ ಕೆಲವರಿಗೆ ಮಾತ್ರ...!
ಮತ್ತಲವರಿಗೆ ಅಲ್ಲಿನ ತಿಂಡಿ - ತೀರ್ಥ;
ಇನ್ನಲವರಿಗೆ ಅಲ್ಲಿನ ಬ್ರ್ಯಾಂಡಿ - ವಗೈರೆ...!

ಹಾ ಕೇಳಿ! ಈ ವಿಶೇಶ ಸಂಗತಿ -
ಬಹುಶಃ ಅದು ನನ್ನ ದುರ್ಗತಿ...?
ನಾ ಕಂಡೆ, ಬಸ್ ಸ್ಟಾಪಿನಲ್ಲೊಂದು ಮುಖವ,
ಚಂದ್ರನಂತಹದೋ - ಸೂರ್ಯನಂತಹದೋ ತಿಳಿಯದು...

ಆ ಮುಖ ನನಗನಿಸಿದ ಹಾಗೆ - ತರುಣಿಯದು!
ಮುಖದಲ್ಲಿ ಚಿಗುರು ಮೀಸೆ, ತೆಳ್ಳಗಿನ ಗಡ್ಡ,
ಜೊತೆಗೆ ತುಂಡಾಗಿ ಕತ್ತರಿಸಿದ್ದ ತಲೆಗೂದಲು...?
ಅಯ್ಯೋ ವಿಧಿಯೆ! ಅದು ತರುಣನ ಮುಖವಿರಬಹುದು!

ಅಲ್ಲಲ್ಲ....ತರುಣಿ?
ಕಾರಣ,
ಆಕೆಯಲ್ಲಿರುವ ಲಜ್ಜೆ,
ಹಾಗು ಧರಿಸಿದ್ದ ಮೂಗುತಿ, ಕಿವಿಯೋಲೆ, ಕೈಬಳೆ-ಕಾಲ್ಗೆಜ್ಜೆ...!

ಹಿಂದಿನಿಂದ ಯಾರೋ ಕೂಗಿದ ಹಾಗಾಯಿತು,
ತಿರುಗೆ ನೋಡಿದರೆ - ನನ್ನ ಗೆಳೆಯ;
ಆತ ಹೇಳಿದ : "ಓ ರಾಜ...
ನೀನು ನೋಡುತ್ತೆರುವವ ಒಬ್ಬ ಖೋಜ....!!!
                           ಯಾರದೋ ಆ ಮುಖ - ನಾ ತಿಳಿಯೆ....???

Wednesday, August 3, 2011

ನಮ್ ಬಾಸೆ.... ೨೫/೬/೨೦೧೧


ಮಾತಾಡಕ್ ನಮ್ ಬಾಸೆ
ಯಾರ್‌ಗಿಲ್ಲ ಆಸೆ?
ಬುಡ್ವಲ್ದು ಹುಚ್‍ನನ್ ಮಗುನ್ -
ಪರದೇಸಿ ಪರ‍್ಸೆ....!


ಅವ್ವ-ಅಪ್ಪ ಆದ್ರು 
ಮಮ್ಮ-ಪಪ್ಪ;
ಅರ್ಥವಾಗ್ದು ನಮ್ ಬಾಸೆ,
ತಿಳಿವಲ್ದು ಪರಬಾಸೆ...!


ಎನ್ಮಾಡೋದು -
ಅಯ್ಯೋ ಪಾಪ...!!


ಬಾರ್‌ಲ-ಹೋಗ್ಲ ಆಯ್ತು
"ಕಮ್" ಲ - "ಗೊ" ಲ,
ಕಡ್ಗುಳ್ದಿದ್ದು -
ಬರೀ "ಲ"...!


ಹಿಂಗಾದ್ರಾತು -
ನಮ್ ಬಾಸೇಲ್ ನೂರಾರ್ ತೂತು....!!!


ಹಪಮ 

Friday, May 27, 2011

ಗಗನ ೧೩/೫/೨೦೧೧



ಗಗನದಾ ಬನ
ಏರಿದೋರ್ ಎಷ್ಟು ಜನ,
ಸ್ಪರ್ಶಿಸಲೆಂದಲವರ ಮನ,
ಸಿಗುವುದಾರಿಗಾ ಚುಂಬನ...?

ಏನಿದೀ ತವಕ,
ನಮ್ಮೀ ಜೀವಕ,
ಹಾರಲಾ ಆಕಾಶಕ...?
ಮನ ಕುಣಿದಿದೆ ತಕ ತಕ....!

ಹೇ ಹುಚ್ಚರಾ -
ಇದೋ ನೋಡಿ,
ಇಲ್ಲೇ ನಾಕ -
ಇಲ್ಲೇ ನರಕ....!

ಗಗನದ ಗಾನ
ಬೇಡವೋ ದಿನ ದಿನ...
ಮನ ತುಂಬಿ ಹಾಡು -
ತದೀಂದೀಂತನ....!

ಹಪಮ 

Tuesday, May 24, 2011

ಕಾಲಚಕ್ರ... ೪/೨/೨೦೧೧



ತಿಂಗಳುರುಳಿದೆ,
ತಿಂಗಳಾ ಬೆಳಕಡಿ;

ತಿಂಗಳರಳಿ -
ತಿಂಗಳುರುಳುವಾ ನಡುವೆ,
ತಿಂಗಳಿಗೆ ತಿಂಗಳಾ ಸೇರ್ಪಡೆ...

ಋತು ತೋರಿದೆ,
ಮುಂದಿನಾ ಋತುಗೆಡೆ...

ತಿಂಗಳರಳಿ ತಿಂಗಳುರುಳುವಾ ನಡುವೆ -
ತಿರುಗಿದೆ ಕಾಲಚಕ್ರ,
ತಿಂಗಳಾ ಬೆಳಕಡಿ -
ಬೆಳಕಿನೆಡೆ...!

ಹಪಮ 

ಎಡೆ... ೩೦/೯/೨೦೦೦



ಯಂಡ್ರು ಮಕ್ಳು ಸಂಸಾರಿಲ್ದೆ
ಬದ್ಕೊಕ್ಕಾಗ್ದೆ ಜನ್ರು...?
ಮನೆ - ಮಠ, ಸಾಮ್ರಾಜ್ಯ ಅಂತ
ಹೊಡ್ದಾಡ್ತಾರ್ಯಾಕೆ ಈ ಹುಚ್ರು...?

ಮೇಲವೆಲ್ಲಾ "ನಶ್ವರ - ನಶ್ವರ"
ಎಂದು ಕೂಗಾಡ್ತಾರೆ/ಕೂಗಾಡ್ತಿದ್ರು
ದೊಡ್ಡವರೆಂದು ತಿಳಿದಿರುವ ಸಾಧು - ಸಂತ್ರು...
ಹೀಗೆನ್ನುತ್ತ ಕಾಡಿನೆಡೆಗೆ ಓಡ್ಹೊಗ್ತಿದ್ರು...!

ಯಂಡ - ಭಂಗಿ ಅಮೃತ ಅಂತ
ಅವುಗಳೊಳಗೆ ಮುಳುಗಿ - ತೇಲಾಡ್ತಿದ್ರು!!
ಇವುಗಳಿಂದಲೇ ಮುಕ್ತಿ...
ಇವುಗಳಿಂದಲೇ ಶಕ್ತಿ ಎಂದರಚುತ್ತಿದ್ದರು -

ನಾ ಏನ ಮಾಡಲಿ...?
ಓ ನನ್ ದ್ಯಾವ್ರೇ...
ಯಾವುದ ಸರಿ ಎನ್ನಲಿ, ಯಾವುದ ಬೆಸ??
ನಂಗ್ ಕೊಂಚ ದಾರಿ ತೋರಿಸು -
ಓ ನನ್ "ಮನವೆಂಬ" ದ್ಯಾವ್ರೆ...

ಹಪಮ 

Friday, May 20, 2011

ಬಣ್ಣದ ಬಣ್ಣ... ೨/೫/೨೦೧೧



ಬಣ್ಣದ ಬಣ್ಣಕೆ
ಬಣ್ಣ ಹಚ್ಚಿದವರ‍್ಯಾರು...?

ಬಳಿದ ಬಣ್ಣಕೆ
ಹೆಸರಿಟ್ಟವರ‍್ಯಾರು...?

ಹಸಿರು, ಕೆಂಪು, ನೀಲಿ ಬಣ್ಣ,
ವಿಧ ವಿಧ ನೂರಾರು ಬಣ್ಣ...

ತುಂಬಿದೆ -
ತುಂಬಿದ ಕಣ್ಣ...!

ಹಪಮ 

Thursday, May 19, 2011

ಅಂದು... ೮/೬/೨೦೦೦



"ಸ್ವಾಮಿ", ’ಬುದ್ಧಿಯವರು ಇದ್ದಾರ...?’
ಈ ಮೆಲುದನಿ ತಟ್ಟಿತ್ತು - ನನ್ನ ಮನವ;
ತಲೆಯೆತ್ತಿ ನೋಡಿದೆ -
ಮಿಡಿಯಿತು ನನ್ನಂತರಂಗ...ಆ ಬಡತನದ ಮುಖ ಕಂಡು!
"ಹೊಡೆದಂತಾಯಿತು" ನನ್ನ ಹೃದಯಕೆ - ಆ ಕಂಗಳಿಂದ (ಕುಳಿಬಿದ್ದ ಕಂಗಳಿಂದ)
ಹುರುಪಿಲ್ಲದ...ಶವಕಳೆ ಕವಿದ - ಆ ಮೋರೆಯಿಂದ...?
ಬಡತನದ ಬೇಗೆಯ - ಬೇಗೆಯಿಂದ ಮರುಗಿದ,
ಮರುಗಿ, ಮರುಗಿ - ಕೊರಗಿ, ಸೊರಗಿದ "ಭಾರಿ ಗುಂಡು...!!!"
ಒಂದು ಕ್ಷಣ - ನಾನಲ್ಲದವ ನಾನಾದೆ,
ಮನ ಜುಮ್ಮೆಂದಿತು...ಮೈ ನಡುಗಿತು;
ದೇವರೇ "ಯಾಕೀ ಜೀವನ?
ಈ ಸ್ಥಿತಿಯ ತರದಿರು ಯಾರಿಗೂ..." ಎಂದು ಬೇಡಿಕೊಂಡೆ
ಆ ಭಗವಂತನ.
ಕಣ್ಣೀರು ಮನೆ ಮಾಡಿದವು -
ಗೂಡಿಟ್ಟವು ಈ ನನ್ನ ಕಂಗಳಲಿ...
ಕ್ಷಣ ಕಾಲದ ನಂತರ ಅರಿವಾಯಿತು???
ನನ್ನ ವಾಸ್ತವ...
ನಾ ಯಾರೆಂದು; ಮುಖದಲಿ ಮೂಡಿತು - ಕಿರುನಗೆ...!
ಕಣ್ತೆರೆದೆ...ಕಾಣದಾದೆ...ಆ ಬಡತನದ ಮೋರೆಯ?
ಆ ಕಿರುನಗೆ ನನ್ನ ಅಣಕಿಸಿದಂತೆ -
ಏನೋ ಆತಂಕ - ದುಗುಡ
ಅಂಜಿಕೆ - ಆ ಮುಖವ ನೋಡಿದಾಗಿನಿಂದ...???

ಹಪಮ 

Tuesday, May 17, 2011

ಚೆಲುವಿನೊಳಗೊಂದು ಚೆಲುವೆ...(೧೯೯೯ ರಲ್ಲಿ ಬರೆದದ್ದು...)



ಮುಂಜಾನೆಯ ನಸುಕಿನ ಆ -
ಮುಗ್ಧ ವಾತಾವರಣವ
ನಾ ಕಾಣುವೆ ಪ್ರತಿ ಹದಿನೈದು
ದಿನಕ್ಕೊಮ್ಮೆ...!

ಆ ಚೆಲುವಿನ ವಾತಾವರಣದಲಿ
ನಾ ಮರಳುವೆ ಮನೆಯಿಂದ - ನನ್ನ ಗೂಡಿನಿಂದ??
ಎಲ್ಲೆಲ್ಲೂ ನಿಶ್ಯಬ್ಧ,
ಪ್ರಶಾಂತ ಕತ್ತಲಿನ ವಾತಾವರಣ

ನಾ ಮಲಗುತ್ತಿದ್ದೆ ಇಷ್ಟು ದಿನ,
ಮಲಗಿ ಪಯಣಿಸುತ್ತಿದ್ದೆ
ಸವಿದು ಆ ಚೆಲುವಿನ ಮುಂಜಾನೆಯ
ವಾತಾವರಣವ...!

ಬಂದಳೊಮ್ಮೆ...ಊಹೂ...
ಪ್ರತ್ಯಕ್ಷಳಾದಳು ಎಂದರೆ ತಪ್ಪಾಗಲಾರದು -
ಸುಂದರ ತರುಣಿ, ಲಲನೆ, ನೀರೆ
ಆಕೆಯ ಬಣ್ಣಿಸಲು ಪದಗೊಂಚಗಳೇ ಸಾಲದು!

ಯಾರಾ ಚೆಲುವೆ? ನಾ ತಿಳಿಯೆ...
ಕೆಡಸಿದಳಾ ಮುಗ್ಧ ವಾತಾವರಣವ,
"ಕದ್ದಳು" ನನ್ನ ಆ ಸುಖ ನಿದ್ರೆಯ;
ಆಕೆಯ ಚೆಲುವಿನ ನಯನ ಕಂಡ
ನನ್ನೀ ಮನ,
ಹಾಡಿದೆ ಒಲವಿನ ಗಾಯನ

ಆ ಚೆಲುವಿನೊಳಗೊಂದು ಚೆಲುವೆಯ -
ಮುಗುಳ್ನಗು ಕಂಡು.

ಹಪಮ 

Wednesday, May 11, 2011

I, Me and Myself.... ನಾನು ಮತ್ತು ನನ್ನ ಅನಿಸಿಕೆಗಳು....: ಜೀವನ - "ನಾ ಕಂಡ ಹಾಗೆ" ೨೫/೧೧/೧೯೯೯

I, Me and Myself.... ನಾನು ಮತ್ತು ನನ್ನ ಅನಿಸಿಕೆಗಳು....: ಜೀವನ - "ನಾ ಕಂಡ ಹಾಗೆ" ೨೫/೧೧/೧೯೯೯: "ಸಾಗರ ಮಹಾಸಾಗರ ಸುಖ - ದುಃಖ , ನೋವು - ನಲಿವಿನ ಈ ಜೀವನದಿ ಎಂಬ ಸಾಗರದ ' ಆಳವ ' - ನಾ ಅರಿಯೆ ! ನಾವು ತೇಲುವೆವು ಇದರಲಿ - ದೇಹದಲಿ ಪ್ರಾಣವಿರುವವರೆಗೂ ..."

Monday, April 25, 2011

ಜೀವನ - "ನಾ ಕಂಡ ಹಾಗೆ" ೨೫/೧೧/೧೯೯೯


ಸಾಗರ ಮಹಾಸಾಗರ
ಸುಖ - ದುಃಖ, ನೋವು - ನಲಿವಿನ
ಈ ಜೀವನದಿ ಎಂಬ ಸಾಗರದ
"ಆಳವ" - ನಾ ಅರಿಯೆ!
ನಾವು ತೇಲುವೆವು ಇದರಲಿ -
ದೇಹದಲಿ ಪ್ರಾಣವಿರುವವರೆಗೂ
                 ಉಸಿರಿರುವವರೆಗೂ;
ನಮ್ಮೊಡನೆ ಪ್ರತಿನಿತ್ಯ ತೇಲುವವರೆಷ್ಟೋ
ನೋವು - ನಲಿವಿನ "ಹಡಗಿನಲಿ" - ಕಷ್ಟಗಳ "ಗುಡುಗಿನಲಿ"
ಈ ಸಾಗರದಲಿ ಮೂರು ಮುಖ್ಯ
                 ಮೀನುಗಳು...?
ಹಣ-ಹೆಂಡ-ಹೆಣ್ಣು,
ಇವ ಪಡೆಯಲು ಮಾನವ
ಕಾಣುವ ನೂರಾರು ಕನಸುಗಳು?
ಇವುಗಳಿಂದ ದೇಹ - ಮನಸುಗಳಿಗಾಗುವುದು
ಭಾರಿ ಹುಣ್ಣು...!!!
ಏಕೆ ಬೇಕು ಇವು - ನಾ ಅರಿಯೆ?
ಇವಿಲ್ಲದೆ ಬಾಳಲಾಗದೆ ನಾವು - ನಾ ಅರಿಯೆ...???
ನಾ ಅರಿಯೆ....

ಹಪಮ 

ರಾಮಯ್ಯ ಕಾಲೇಜು (೧೯೯೯ರಲ್ಲಿ ಬರೆದ ಕವನ)


ಕಾಲೇಜೆಂದರೆ ಕಾಲೇಜು, ರಾಮಯ್ಯ ಕಾಲೇಜು
ಅಲ್ಲಿನ ಹುಡುಗಿಯರ ನೋಡುವುದೇ ಒಂದು ಮೋಜು;
ಏನಪ್ಪ ವಿಶೇಷ...?
ಆ ಹುಡುಗಿಯರ ಉಡುಪುಗಳೆಲ್ಲ ಟೈಟು ಇಲ್ಲ ಲೂಜು -
ಕೊಡುತ್ತಾರೆ ನಾನಾ ತರಹ ಪೋಜು.
ಹುಡುಗರ ಗತಿ...
ಅದೊಂದು ವಿಚಿತ್ರ ಸಂಗತಿ
ಹುಡುಗಿಯರ ಮನವೊಲಿಸಲಿಕೆ
ಮಾಡುತ್ತಾರೆ ನಾನಾ ಕಸರತ್ತು (ಸರ್ಕಸ್ಸು)
ಆದಂತೆನಿಸುತ್ತದೆ ಅವರ ತಲೆಯ ಸ್ಕ್ರೂ...?
ಲೂಜು...!!!
ಬಹುಶಃ ಇದಕ್ಕಿಂತಿಲ್ಲ ಮತ್ತೊಂದು...
ಸತ್ಯಸಂಗತಿ.

ಹಪಮ