Thursday, August 18, 2011


ಒಂದು ಮೌನ ವ್ಯಥೆ...    ೧೮/೮/೨೦೧೧


ನಾ ಮನೆಮಾಡಿದ್ದೆ
ನಿನ್ನಲಿ ಅಂದು,
ಬೆಳೆಯ ತೊಡಗಿದ್ದೆ -
ನಿನ್ನಾಹಾರವ ತಿಂದು...!


ವಿಷಯ ತಿಳಿದೊಡನೆ,
ಎಲ್ಲರಲಿ ಮೂಡಿತಾ ಪರ್ವ;
ಅದರಿಂದಾನೆ -
ನಿನಗೆ ಮಹಾ ಗರ್ವ...!


ವೈದ್ಯರ ಬಳಿ ಕರೆದೊಯ್ದರು ನಿನ್ನ,
ತಿಳಿದರು ನನ್ನ ಲಿಂಗವನ್ನ...
ಎಲ್ಲರಲಿ ಮಾತಾಯಿತು -
"ಗಂಡಾಗಿದ್ದರೆ ಎಷ್ಟು ಚೆನ್ನ....!"


ಎಂತಹದಾ ಸಂದರ್ಭ,
ಮನೆಮಂದಿಗೆಲ್ಲಾ -
ಬೇಡ,
ಆ ಗರ್ಭ...!!!


ವೈದ್ಯರ ಸಲಹೆ -
ಎಲ್ಲರೂ ಸೇರಿ
ಸದ್ದಿಲ್ಲದೆ ಚಿವುಟಿದರು,
ಮೊಗ್ಗು ಅರಳದಿಹೆ...!


ಆಚರಿಸುತ ಭ್ರೂಣ ಹತ್ಯೆ,
ಹೇಳಿದರು ನಿನಗೆ -
"ಪುನಃ ಪ್ರಯತ್ನಿಸು,
ಸುಮ್ನ್ಯಾಕ್ ಅತ್ತೀಯೆ....!!!"


ಹಪಮ

No comments:

Post a Comment