Friday, August 17, 2012

ಬಾರು - ಬೀರು


 ಬಾರು - ಬೀರು "                         

ನಮ್ ಹುಡುಗುರ್‍ಗೆ ಬೇಕು
ಹೆಂಡದ ಬಾರು -
ಕುಡ್ಯೋಕೆ ಚಿಲ್ಡ್ ಬೀರು...!

ನಮ್ ಹುಡ್ಗೀರ‍್ಗೆ ಬೇಕು
ಚಿನ್ನದ ಬಾರು -
ಬಚ್ಚಿಡೋಕೆ ಕಬ್ಬಿಣದ ಬೀರು...!

ನಮ್ ಮಕ್ಳುಗೆ ಬೇಕು
ಚಾಕೊಲೇಟ್ ಬಾರು -
ಇಡೋಕೆ ಶೀತಕ (ಫ್ರಿಡ್ಜ್) ಬೀರು...! 

ಒಟ್ಟಾರೆ -
ಎಲ್ರಿಗೂ ಬೇಕೆ ಬೇಕು,
"ಬಾರು - ಬೀರು...!"

ಹಪಮ

Wednesday, June 13, 2012


ನಮ್ಮೂರ ಆಟ - ಹೋಯಿತು ಎತ್ತ?    //೨೦೧೨

ಕಣ್ಣಾ ಮುಚ್ಚೆ, ಕಾಡೆ-ಗೂಡೆ,
ಉದ್ದಿನ ಮೂಟೆ ಉರುಳೇ ಹೋಯ್ತು...!
ಹೇಳೋರಿಲ್ಲ - ಕೇಳೋರಿಲ್ಲ,
"ಹುಯ್ಯೋ-ಹುಯ್ಯೋ ಮಳೆರಾಯನ?"

ಕೆರೆ-ದಡ, ಕಲ್ಲು-ಮಣ್ಣು,
ಕುಂಟಾ ಬಿಲ್ಲೆ - ಕಡ್ಡಿ ಆಟ;
ರತ್ತೋ-ರತ್ತೋ ರಾಯನ ಮಗಳೆ,
ಇಂದಾಗಿವೆ ಬರೀ ರಗಳೆ...!

ರಾಮ-ಭೀಮ-ಸೋಮ - ಚೂ ಚೆಂಡು,
ಲಗೋರಿ, ಗೋಲಿ, ಬುಗರಿ;
ಕಬಡ್ಡಿ, ಗಿಲ್ಲಿ-ದಾಂಡು,
ಹೋಗಾಯ್ತು ಮುಖ ಮುಚ್ಕೊಂಡು...!

ಅಳಿ-ಗುಳಿ, ಗಟ್ಟಾ-ಬಾರ (ಚೌಕಾ-ಬಾರ)
ಪಗಡೆ-ಕವಡೆ, ಪಚ್ಚಿ - ಟಿಕ್ಕಿ;
ಅಣ್ಣೆ ಕಲ್ಲು, ಅಡಿಗೆ-ಗುಡಿಗೆ,
ಅವಲಕ್ಕಿ-ಪವಲಕ್ಕಿ, ಗೆರೆ-ಚುಕ್ಕಿ...
ಸರಿದಾವೆ ದೂರದ ಬದಿಗೆ...!

ಎಲ್ಲೆಲ್ಲು ಈಗ -

ಫ಼ುಟ್ ಬಾಲ್, ವಾಲಿಬಾಲ್, ತ್ರೋಬಾಲ್
ಬೇಸ್ಬಾಲ್, ಹಾಕಿ, ಜಾಕಿ;
ಕ್ರಿಕೆಟ್-ಕ್ರಿಕೆಟ್-ಕ್ರಿಕೆಟ್...
ಏನಿದರ ಸೀಕ್ರೆಟ್?

ವಿಡಿಯೋ ಗೇಮ್,
ಮೀಡಿಯಾದ ಗಮ್,
ಎಲ್ರ ಕೈಲೂ ಮೊಬೈಲು -
ಎಲ್ಲೆಲ್ಲೂ ಇದ್ರದ್ದೇ ಐಲು...!

ಕಣ್ಣಾ ಮುಚ್ಚೆ, ಕಾಡೆ-ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು...!!!


ಹಪಮ 

Sunday, September 4, 2011


ಚೌಕಾಸಿ...     

ಎಲ್ಲಿಲ್ಲ ಈ "ಬಿಸಿ"
ಎಲ್ಲೆಡೆ ಬರೀಚೌಕಾಸಿ
ಮನೆ ಹುಡುಕುವ ದಳ್ಳಾಳಿ
ಬಟ್ಟೆ ಹೊಲಿಯುವ ದರ್ಜಿ;
ಹಬ್ಬ ಬಂತೆಂದರೆ...??
ಎಲ್ಲಾ ಅವರವರ ಮರ್ಜಿ!

ಹೂವು - ಹಣ್ಣು...ತರಕಾರಿ
ಬಾಳೆಕಂಬ, ಮಾವಿನ ಸೊಪ್ಪು,
ಅಷ್ಟೇ ಏಕೆ...?
ಹುಬ್ಬೇರಿಸದಿರಿ,
ದೇವರನ್ನೂ ಕೂಡ, ಸ್ವಾಮಿ!
ಚೌಕಾಸಿ...

ಮೊನ್ನೆ...ಮೊನ್ನೆ ಆಯ್ತು -
ವಿನಾಯಕ ಚತುರ್ಥಿ,
ನೋಡಬೇಕಿತ್ತು ನೀವ್ ಕಣ್ರಿ -
ಈ ನಮ್ ಜನ್ರ ಸ್ಥಿತಿ,
ವ್ಯಾಪಾರಸ್ಥರ ಹಾವಳಿಗೆ ಸಿಕ್ಕಿ -
ಆಗಿತ್ತು ಅದೋ ಗತಿ...!

ವಿನಾಯಕನ ವಿಗ್ರಹಕ್ಕೆ, ನಾನಾ ವಿಧಗಳಿಗೆ
ಗಗನಕ್ಕೇರಿದ ಬೆಲೆ -
ಬಿಡುವರೇ ನಮ್ ಜನ...?
ಹಬ್ಬ ಮುಗಿಸುದ್ರು...
ಭಾರೀ ಕಾಸ್ನಲ್ಲಿ,
ಎಲ್ಲಾ ಬರೀ ಚೌಕಾಸೀಲಿ...!!

ಹಪಮ

Saturday, August 20, 2011

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಎಡೆ... ೩೦/೯/೨೦೦೦

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಎಡೆ... ೩೦/೯/೨೦೦೦: ಯಂಡ್ರು ಮಕ್ಳು ಸಂಸಾರಿಲ್ದೆ ಬದ್ಕೊಕ್ಕಾಗ್ದೆ ಜನ್ರು...? ಮನೆ - ಮಠ, ಸಾಮ್ರಾಜ್ಯ ಅಂತ ಹೊಡ್ದಾಡ್ತಾರ್ಯಾಕೆ ಈ ಹುಚ್ರು...? ಮೇಲವೆಲ್ಲಾ "ನಶ್ವರ - ನಶ್ವರ" ಎಂದು ಕೂಗಾ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಕಾಲಚಕ್ರ... ೪/೨/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಕಾಲಚಕ್ರ... ೪/೨/೨೦೧೧: ತಿಂಗಳುರುಳಿದೆ , ತಿಂಗಳಾ ಬೆಳಕಡಿ ; ತಿಂಗಳರಳಿ - ತಿಂಗಳುರುಳುವಾ ನಡುವೆ , ತಿಂಗಳಿಗೆ ತಿಂಗಳಾ ಸೇರ್ಪಡೆ ... ಋತು ತೋರಿದೆ , ಮುಂದಿನಾ ಋತುಗೆಡೆ ... ತಿಂಗಳರಳಿ ತ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಗಗನ ೧೩/೫/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ಗಗನ ೧೩/೫/೨೦೧೧: ಗಗನದಾ ಬನ ಏರಿದೋರ್ ಎಷ್ಟು ಜನ , ಸ್ಪರ್ಶಿಸಲೆಂದಲವರ ಮನ , ಸಿಗುವುದಾರಿಗಾ ಚುಂಬನ ...? ಏನಿದೀ ತವಕ , ನಮ್ಮೀ ಜೀವಕ , ಹಾರಲಾ ಆಕಾಶಕ ...? ಮನ ಕುಣಿದಿದೆ ...

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ನಮ್ ಬಾಸೆ.... ೨೫/೬/೨೦೧೧

ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....: ನಮ್ ಬಾಸೆ.... ೨೫/೬/೨೦೧೧: ಮಾತಾಡಕ್ ನಮ್ ಬಾಸೆ ಯಾರ್‌ಗಿಲ್ಲ ಆಸೆ? ಬುಡ್ವಲ್ದು ಹುಚ್‍ನನ್ ಮಗುನ್ - ಪರದೇಸಿ ಪರ‍್ಸೆ....! ಅವ್ವ-ಅಪ್ಪ ಆದ್ರು ಮಮ್ಮ-ಪಪ್ಪ; ಅರ್ಥವಾಗ್ದು ನಮ್ ಬಾಸೆ, ತಿ...