ನಮ್ಮೂರ ಆಟ - ಹೋಯಿತು
ಎತ್ತ? ೩/೩/೨೦೧೨
ಕಣ್ಣಾ ಮುಚ್ಚೆ, ಕಾಡೆ-ಗೂಡೆ,
ಉದ್ದಿನ ಮೂಟೆ ಉರುಳೇ ಹೋಯ್ತು...!
ಹೇಳೋರಿಲ್ಲ - ಕೇಳೋರಿಲ್ಲ,
"ಹುಯ್ಯೋ-ಹುಯ್ಯೋ ಮಳೆರಾಯನ?"
ಕೆರೆ-ದಡ,
ಕಲ್ಲು-ಮಣ್ಣು,
ಕುಂಟಾ ಬಿಲ್ಲೆ - ಕಡ್ಡಿ
ಆಟ;
ರತ್ತೋ-ರತ್ತೋ ರಾಯನ
ಮಗಳೆ,
ಇಂದಾಗಿವೆ ಬರೀ ರಗಳೆ...!
ರಾಮ-ಭೀಮ-ಸೋಮ - ಚೂ ಚೆಂಡು,
ಲಗೋರಿ, ಗೋಲಿ,
ಬುಗರಿ;
ಕಬಡ್ಡಿ, ಗಿಲ್ಲಿ-ದಾಂಡು,
ಹೋಗಾಯ್ತು ಮುಖ ಮುಚ್ಕೊಂಡು...!
ಅಳಿ-ಗುಳಿ,
ಗಟ್ಟಾ-ಬಾರ (ಚೌಕಾ-ಬಾರ)
ಪಗಡೆ-ಕವಡೆ,
ಪಚ್ಚಿ - ಟಿಕ್ಕಿ;
ಅಣ್ಣೆ ಕಲ್ಲು, ಅಡಿಗೆ-ಗುಡಿಗೆ,
ಅವಲಕ್ಕಿ-ಪವಲಕ್ಕಿ,
ಗೆರೆ-ಚುಕ್ಕಿ...
ಸರಿದಾವೆ ದೂರದ ಬದಿಗೆ...!
ಎಲ್ಲೆಲ್ಲು ಈಗ -
ಫ಼ುಟ್ ಬಾಲ್, ವಾಲಿಬಾಲ್,
ತ್ರೋಬಾಲ್
ಬೇಸ್ಬಾಲ್, ಹಾಕಿ,
ಜಾಕಿ;
ಕ್ರಿಕೆಟ್-ಕ್ರಿಕೆಟ್-ಕ್ರಿಕೆಟ್...
ಏನಿದರ ಸೀಕ್ರೆಟ್?
ವಿಡಿಯೋ ಗೇಮ್,
ಮೀಡಿಯಾದ ಗಮ್,
ಎಲ್ರ ಕೈಲೂ
ಮೊಬೈಲು -
ಎಲ್ಲೆಲ್ಲೂ
ಇದ್ರದ್ದೇ ಐಲು...!
ಕಣ್ಣಾ ಮುಚ್ಚೆ, ಕಾಡೆ-ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು...!!!ಹಪಮ
No comments:
Post a Comment