Tuesday, May 24, 2011

ಎಡೆ... ೩೦/೯/೨೦೦೦



ಯಂಡ್ರು ಮಕ್ಳು ಸಂಸಾರಿಲ್ದೆ
ಬದ್ಕೊಕ್ಕಾಗ್ದೆ ಜನ್ರು...?
ಮನೆ - ಮಠ, ಸಾಮ್ರಾಜ್ಯ ಅಂತ
ಹೊಡ್ದಾಡ್ತಾರ್ಯಾಕೆ ಈ ಹುಚ್ರು...?

ಮೇಲವೆಲ್ಲಾ "ನಶ್ವರ - ನಶ್ವರ"
ಎಂದು ಕೂಗಾಡ್ತಾರೆ/ಕೂಗಾಡ್ತಿದ್ರು
ದೊಡ್ಡವರೆಂದು ತಿಳಿದಿರುವ ಸಾಧು - ಸಂತ್ರು...
ಹೀಗೆನ್ನುತ್ತ ಕಾಡಿನೆಡೆಗೆ ಓಡ್ಹೊಗ್ತಿದ್ರು...!

ಯಂಡ - ಭಂಗಿ ಅಮೃತ ಅಂತ
ಅವುಗಳೊಳಗೆ ಮುಳುಗಿ - ತೇಲಾಡ್ತಿದ್ರು!!
ಇವುಗಳಿಂದಲೇ ಮುಕ್ತಿ...
ಇವುಗಳಿಂದಲೇ ಶಕ್ತಿ ಎಂದರಚುತ್ತಿದ್ದರು -

ನಾ ಏನ ಮಾಡಲಿ...?
ಓ ನನ್ ದ್ಯಾವ್ರೇ...
ಯಾವುದ ಸರಿ ಎನ್ನಲಿ, ಯಾವುದ ಬೆಸ??
ನಂಗ್ ಕೊಂಚ ದಾರಿ ತೋರಿಸು -
ಓ ನನ್ "ಮನವೆಂಬ" ದ್ಯಾವ್ರೆ...

ಹಪಮ 

2 comments:

  1. "ಮನವೆಂಬ" ದ್ಯಾವ್ರು ಬೇಗ ದಾರಿ ತೋರಿಸ್ತಾನೆ ಬಿಡಿ ಸಾರ್....
    ಚೆಂದದ ಸಾಲುಗಳು.....

    ReplyDelete
  2. ಅಶ್ವಾಸನೆಗಳಿಗೆ ಧನ್ಯವಾದಗಳು.....

    ReplyDelete